‘ದೊಡ್ಮನೆ ಹುಡ್ಗ ನಾಳೆಯಿಂದ ತೆರೆಗೆ
Posted date: 29 Thu, Sep 2016 – 12:03:53 PM

ಅಜಯ್ ಪಿಕ್ಚರ‍್ಸ್ ಲಾಂಛನದಲ್ಲಿ ಎಂ.ಗೋವಿಂದು ಅವರು ನಿರ್ಮಿಸಿರುವ ‘ದೊಡ್ಮನೆ ಹುಡ್ಗ’ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  
ಸೂರಿ ನಿರ್ದೇಶನದ ಈ ಚಿತ್ರದ ನಾಯಕರಾಗಿ ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ಅಭಿನಯಿಸಿದ್ದಾರೆ. ಸೂರಿ ಹಾಗೂ ವಿಕಾಸ್ ಅವರು ಬರೆದಿರುವ ಕಥೆಗೆ ಸೂರಿ ಅವರೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.  ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ದೀಪು.ಎಸ್.ಕುಮಾರ್ ಸಂಕಲನ, ಶಶಿಧರ ಅಡಪ ಅವರ ಕಲಾ ನಿರ್ದೇಶನವಿದೆ.  
    ರೆಬಲ್‌ಸ್ಟಾರ್ ಅಂಬರೀಶ್, ಪುನೀತ್‌ರಾಜಕುಮಾರ್, ಸುಮಲತ ಅಂಬರೀಶ್, ಭಾರತಿ ವಿಷ್ಣುವರ್ಧನ, ರಾಧಿಕಾ ಪಂಡಿತ್, ಶ್ರೀನಿವಾಸಮೂರ್ತಿ, ಅವಿನಾಶ್, ರಂಗಾಯಣ ರಘು, ರವಿಸಂಕರ್, ಉದಯ್, ಚಿಕ್ಕಣ್ಣ, ಸಂತೋಷ್ ರಾಜವರ್ಧನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.






 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed